BMTC ಬಸ್ ಹತ್ತಿದೆ. ಎಲ್ಲಾ ಸೀಟ್ ಫುಲ್ ಆಗಿತ್ತು. ಅರ್ಧ ಸೀಟು ಖಾಲಿ ಇತ್ತು. ಪ್ರಿಯಾಂಕ ಚೋಪ್ರ ತರ ಕಾಣೋ ಹುಡುಗಿ ಕೂತಿದ್ದಳು ಅರ್ಧ ಸೀಟು ಖಾಲಿ ಬಿಟ್ಟು. ತಡಮಾಡದೆ ಆ
ಸೀಟಲ್ಲೇ ಕೂತೆ. ಮೆಲ್ಲನೆ ಒರಗಿದೆ. ಮನ ಮೆಚ್ಚಿದೆ. ಕಣ್ಣು ಮುಚ್ಚಿದೆ. ನಿದ್ದೆಗೂ ಅರಿವಾಗದ ಒಂದು ನಿದ್ದೆ ಬಂತು. ಟಿಕೆ ಟಿಕೇಟ್ಸ್ ಅಂತ ಒಂದು ಸ್ವರ ಕೇಳ್ತು. ಒಂದು ಮಜೆಸ್ಟಿಕ್ ಕೊಡಿ ಎಂದು ಇಪ್ಪತ್ತು ರೂಪಾಯಿ ಕೊಟ್ಟೆ. ತುಂಡು ಟಿಕೇಟ್ ಹಾರಿ ಬಂದು ಕಿಸೆ ಸೇರಿತು. ಕಣ್ಣುಜ್ಜಿ ಮತ್ತೊಮ್ಮೆ ನೋಡುವಷ್ಟರಲ್ಲಿ ಎದುರು ಸೀಟಿನಲ್ಲಿ ಕೂತ ಬೋಳು ತಲೆಯ ಮೇಲೊಂದು ಐದು ರೂಪಾಯಿ ನಾಣ್ಯ ಬಿದ್ದು ಅಲ್ಲಿಂದ ಜಂಪಾಗಿ ಟಕ್ಕಂತ ಕಿಸೆಗೆ ಬಿತ್ತು. ಯಾವನಪ್ಪ ಇದು ಎಂದು ಸಿಟ್ಟಿನಲ್ಲಿ ಸೀಟು ಬಿಟ್ಟು ತಿರುಗಿ ನೋಡಿದೆ......! ಹ್ಹಾಂ ರಜನೀಕಾಂತ್.......!
ಟಿಕೇಟ್ ವಾಪಸ್ಸ್ ಕೊಟ್ಟೆ, ಒಂದು ಡೇ ಪಾಸ್ ತಗೊಂಡೆ. ಇಳಿಯಲ್ಲ ಒಂದು ದಿನ ಪೂರ್ತಿ ಈ
ಬಸ್ಸಲ್ಲೇ ಇರೋದು ಎಂದು ಗಟ್ಟಿ ಕೂತೆ ಪ್ರೀಯಾಂಕ ತರ ಇರೊ ಹುಡುಗಿಯನ್ ಅಂಟಿಕೊಂಡು. ಎದೆ ಮೇಲೆ ಒಂದು ಕೈ ಬಂದಂಗೆ ಆಯ್ತು. ಜೋರು ಚಳಿ ಆಯ್ತು. ಕಿಟಕಿ ಗ್ಲಾಸ್ ಹಾಕುವನಾ ಎಂದು ಕೇಳಿದೆ. ಹೆಂಡತಿ ಸ್ವರ ಕೇಳಿತು. ಕಿಟಕಿ ನಾನೆ ತೆಗೆದಿದ್ದು ಸ್ವಲ್ಪ ಚಳಿ ಆಗಲೆಂದೇ.... ಎದ್ದೇಳಿ ಸಾಕು ಬೆಳಕಾಗಿದೆ.
ಅಬ್ಬಾ.. ಎಚ್ಚರ ಆದಾಗ ಮೂಡಿದ ಒಂದು ಆಸೆ ಒಂದು ಸಲ ರಜನೀಕಾಂತ್ ಟಿಕೆಟ್ ತೆಗೆಯೋ ಬಸ್ಸಲ್ಲಿ ಡೋರಲ್ಲಿ ನೇತಾಡಿಕೊಂಡು ಪ್ರಯಾಣ ಮಾಡಬೇಕು. ಎಸೆವ ಚಿಲ್ಲರೆಯನ್ನು ಕ್ಯಾಚ್ ಹಿಡಿಯಲು ಆಗದೆ ಒದ್ದಾಡಬೇಕು. ಆಗವರು ಅಂಬರೀಶಣ್ಣ ಸ್ಟೈಲಲ್ಲಿ ಬಯ್ಯಬೇಕು.

No comments:
Post a Comment