ಶಿವಶಂಕರ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದ.
ಮೂರು ತಿಂಗಳಾದ ಮೇಲೆ ಟೀಚರ್ ಬಂದು ನಿಮಗೆಲ್ಲಾ ಒಂದು ಕಿರುಪರೀಕ್ಷೆ ಇದೆ ಎಂದು ಹೇಳಿದರು.
ಶಿವಶಂಕರ ತನ್ನ ಕತ್ತು ಮುಟ್ಟಿ ನೋಡಿದ ಏನೂ ಬಿಸಿ ಆದಂಗೆ ಇರಲಿಲ್ಲ ಮತ್ತೆಂತ ಪರೀಕ್ಷೆ ಇವರದ್ದು....?
ಮನೆಗೆ ಹೋಗಿ ಅಮ್ಮನತ್ರ ಹೇಳ್ದಾ ಅಮ್ಮ ನನ್ಗೇನು ಹುಷಾರಿಲ್ವಾ.....? ನೋಡಿ ಮೈ ಏನು ಬಿಸಿ ಇಲ್ಲ, ಮೂಗಿನೊಳಗೆ ಬೆರಳು ಹಾಕಿ ನೋಡಿ ಶೀತನೂ ಇಲ್ಲ...! ಮತ್ತೆ ಯಾಕಮ್ಮ ಶಾಲೆಯಲ್ಲಿ ಕಿರುಪರೀಕ್ಷೆ ಮಾಡ್ತಾರಂತಲ್ಲ.
ಅಮ್ಮನಿಗೆ ತಾನು ಬದುಕಿನಲ್ಲಿ ಬರೆದ ಮೊದಲ ಪರೀಕ್ಷೆ ನೆನಪಾಯ್ತು. ಈಗ ಮಗನ ಪರಿಸ್ಥಿತಿ ನೆನೆದು ನಾಚಿದಳು ಅಮ್ಮ.
ಶಂಕ್ರೂ ಪರೀಕ್ಷೆ ಅಂದ್ರೆ ಜ್ವರ ಬಂದಾಗ ಡಾಕ್ಟರ್ ಮಾಡ್ತಾರಲ್ಲ ಅದೊಂದೇ ಪರೀಕ್ಷೆ ಅಲ್ಲಾ, ಜೀವನದಲ್ಲಿ ಬೇರೆ ಬೇರೇ ಪರೀಕ್ಷೆಗಳಿವೆ....!
ಈಗ ಇದು ಶಾಲೆಯಲ್ಲಿ ನಿಮಗೆ ಮಾಡಿದ ಪಾಠದ ಬಗ್ಗೆ ಪರೀಕ್ಷೆ. ಪ್ರಶ್ನೆಪತ್ರಿಕೆ ಕೊಡ್ತಾರೆ ನೀವು ಉತ್ತರ ಕೊಡಬೇಕು.

ಅಂತು ಶಂಕ್ರನ ಬದುಕಿನಲ್ಲಿ ಮೊದಲ ಪರೀಕ್ಷೆ ಆರಂಭಾಯ್ತು. ಕಿರುಪರೀಕ್ಷೆ ಮೀರಿ ಮಧ್ಯಾವಧಿ ಬರೆಯುವಲ್ಲಿಗೆ ಬಂದ. ಮೊದಲ ಬಾರಿಗೆ ನಾಲ್ಕು ಪುಟದ ಪ್ರಶ್ನೆಪತ್ರಿಕೆ ಕೈಗೆ ಬಂದಾಗ ಎಲ್ಲಿಂದ ಬರೆಯಲು ಆರಂಭಿಸಬೇಕೆಂದೇ ಗೊತ್ತಿಲ್ಲದ ಪಾಪ ದಡ್ಡ ಶಂಕ್ರೂ ಪ್ರಶ್ನೆಪತ್ರಿಕೆಯಲ್ಲಿರುವ ನಿಬಂಧನೆಗಳನ್ನೂ ಬರೆದ. ಆಮೇಲೆ ಪ್ರಶ್ನೆ ಸೂಚಕವನ್ನೂ ಬರೆದು ಪ್ರಶ್ನೆಯನ್ನೂ ಬರೆದು ಉತ್ತರಿಸಲಾರಂಭಿಸಿದ. ಎರಡು ಪುಟದ ಪ್ರಶ್ನೆಗಳಿಗ ಉತ್ತರಿಸುವಷ್ಟರಲ್ಲಿ ಪರೀಕ್ಷಾ ಅವಧಿ ಮುಗಿಯಿತು. ಟೀಚರ್ ಬಂದು ಉತ್ತರ ಪತ್ರಿಕೆಯನ್ನು ಕೇಳಿದರು. ಅಯ್ಯೋ ದೇವರೆ ಇನ್ನೂ ಎರಡು ಪುಟ ಬಾಕಿ ಇದೆ ಟೀಚರ್ ಮನೆಗೆ ತಗೊಂಡು ಹೋಗಿ ಎಲ್ಲ ಬರೆದು ನಾಳೆ ತಗೊಂಡು ಬರ್ಲಾ ಎಂದು ಕೇಳಿದ ಶಂಕ್ರೂ.
ಮನೆಗೆ ತಗೊಂಡು ಹೋದರೆ ನೋಡಿ ಉತ್ತರ ಬರೆಯಬಹುದೆಂಬುದೂ ಗೊತ್ತಿಲ್ಲದೆ ಕೇಳಿದ್ದ ಪಾಪ. ಅಂತೂ ಒಂದೊಂದೇ ಪರೀಕ್ಷೆ ಬರೆದು ಸಾಗುತ್ತಾ ಸಾಗುತ್ತ ಪಾಸಾಗುತ್ತಾ ಹತ್ತನೇ ತರಗತಿಯ ಪೂರ್ವಭಾವಿ ಪರೀಕ್ಷೆ ಬರೆದು ಅಂತಿಮ ಪರೀಕ್ಷೆ ಬರೆವಲ್ಲಿಗೆ ತಲುಪಿದ. ಅಂದು ಮೂರನೆಯ ದಿನ ಸಮಾಜ ಪರೀಕ್ಷೆ. ಗೊತ್ತಿದ್ದ ಪ್ರಶ್ನೆಗಳಿಗೆಲ್ಲಾ ಉತ್ತರ ಬರೆದ. ಕೊನೆಗೊಂದು ಪ್ರಶ್ನೆ ತುಂಬಾ ಕಾಡಲಾರಂಭಿಸಿತು. ಅಂದರೆ ಪ್ರಶ್ನೆ ಸುಲಭ ಇತ್ತು ಆದರೆ ಆ ಪ್ರಶ್ನೆಯ ಸೂಚನೆ ಹೀಗಿತ್ತು 'ಅಂಧ ವಿದ್ಯಾರ್ಥಿಗಳಿಗೆ ಮಾತ್ರ' ಎಂದು. ಗೊಂದಲ ಹುಟ್ಟಿದ್ದೇ ಇಲ್ಲಿ ಅಂಧ ಅನ್ನುವುದನ್ನು ಅಂದ ಎಂದು ತಿಳಿದುಕೊಂಡ. ಈಗೇನು ಮಾಡುವುದು ಇದಕ್ಕೆ ಉತ್ತರ ಬರೆದರೆ ತಾನು ಅಂದ ಚಂದ ಹುಡುಗ ಎಂದಾಗುತ್ತದೆ ಆದರೆ ತಾನು ಚಂದ ಇದ್ದೀನೋ ಇಲ್ವೋ ಅನ್ನುವುದೂ ಗೊತ್ತಿಲ್ವೆ. ಯಾವುದಕ್ಕೂ ಇರಲಿ ಅಂತ ಎದುರು ಬೆಂಚಿನಲ್ಲಿ ಸುನಿತಾ ಸವಿತಾನಲ್ಲಿ ಕೇಳಿದ. ಅವಳೋ ತನ್ನ ಮೂಗಿನ ಮೇಲಿದ್ದ ಕನ್ನಡಕವನ್ನು ಮೇಲೆಕ್ಕೇರಿಸಿ ಅದೇನೋ ಕೈ ಭಾಷೆಯಲ್ಲೇ ಕಣ್ಣು ತೋರಿಸಿ ಹೇಳಿದಳು. ಅರ್ಥ ಆಗದೆ ಉತ್ತರಿಸದೆ ಬಂದ. ಹೊರಗೆ ಬಂದ ಮೇಲೆ ಸುನಿತಾ ಸವಿತಾ ಕರೆದು ಏ ಕೆಪ್ಪ ಅದು ಕಣ್ಣು ಕಾಣದವರಿಗೆ ಬರೆಯಲು ಇರುವ ಪ್ರಶ್ನೆ ಮಾರಾಯ. ನಾವೆಲ್ಲ ಅದರ ಬದಲು ಭಾರತದ ನಕ್ಷೆ ಬಿಡಿಸಬೇಕು. ನೀನೊಬ್ಬ ದಡ್ಡ, ಭಾರತ ಚಿತ್ರ ಬರೆಯೋದನ್ನು ಬಿಟ್ಟು ಶ್ರೀಲಂಕಾ ಚಿತ್ರ ಬರೆದಿದ್ದೀಯಲ್ಲ ಮಾರಾಯ. ನೀನು ಪಾಸಾಗೋದು ಡೌಟು. ಆಗ ಶಂಕ್ರು ಡೌಟಾ ಎ ಹೋಗ ನನಗೆ ಕನ್ಫರ್ಮ್ ಖಂಡಿತಾ ಜಸ್ಟ್ ಫೈಲ್ ಎಂದು. ಅಂತೂ ಇಂತೂ ಈ ಶಂಕ್ರೂನ ಅಮ್ಮ ದೇವರಿಗಿಟ್ಟ ತುಪ್ಪದ ದೀಪದ ಫಲವಾಗಿ ಜಸ್ಟ್ ಪಾಸಾದ.
ಹೀಗೆ ಒಂದೊಂದೇ ಹಂತ ದಾಟುತ್ತಾ ವಿದ್ಯಾಭ್ಯಾಸ ಜೀವನದ ಕೊನೇಯ ಪರಿಕ್ಷೆ ಬರೆದಂದು ವಿಜೃಂಭಿಸಿದ. ಇನ್ನು ನನ್ನನ್ನು ಯಾರು ಪರೀಕ್ಷೆ ಮಾಡುವ ಹಾಗಿಲ್ಲ ಎಂದು....

ಅಷ್ಟರಲ್ಲೇ ಅಮ್ಮ ಮಗನಿಗೆ ಮದುವೆ ಮಾಡುವ ನಿರ್ಧಾರ ಮಾಡಿದರು.......!
ಗೊತ್ತೇ ಇರಲಿಲ್ಲ ನಿಜವಾದ ಪರೀಕ್ಷೆ ಶುರುವಾಗಿದ್ದೇ ಇಲ್ಲಿಂದ....
ವರಪರೀಕ್ಷೆಯಲ್ಲಿ ಸತತ ಎಂಟು ಭಾರಿ ಫೈಲ್ ಮತ್ತೆ ಮರುಪರೀಕ್ಷೆಯಲ್ಲಿ .... ಹಂಗೋ ಹಿಂಗೋ ಜಸ್ಟ್ ಪಾಸಾದ.
ಮದುವೆ ಆಯ್ತು.... ಮತ್ತೆ ದಿನವೂ ಪರೀಕ್ಷೆ ನಿರಂತರ ಮರುಪರೀಕ್ಷೆ. ಕೆಲವು ಪರೀಕ್ಷೆಗಂತೂ ಫಲಿತಾಂಶಗಳೇ ಇಲ್ಲ. ಆದರೂ ಖಡ್ಡಾಯವಾಗಿ ದಿನಾ ಪರೀಕ್ಷೆ ಬರೆಯಬೇಕು.

ಯಾರು ಹೇಳಿದ್ದು ಹೆಂಡತಿ ಗಂಡನಲ್ಲಿ ಸಂಶಯ ಪಡುತ್ತಾಳೆಂದು. ನಮ್ಮ ಶಂಕ್ರು ಹೆಂಡತಿಗೆ ಅವನು ಯಾವ ಹುಡುಗಿ ಹತ್ತಿರ ಮಾತಾಡಿದ್ರೂ ಸಂಶಯನೇ ಇಲ್ಲ.....! ಕನ್ಫ್ ರ್ಮ್.... ಅದು ಅದೇ ಎಂದು. ಶಂಕ್ರು ಜೊತೆಗೆ ಮಾತಾಡುವ ಎಲ್ಲಾ ಹುಡುಗಿಯರನ್ನ ಇವಳು ತನ್ನ ಸವತಿ ಎಂದೇ ತಿಳಿದಿರುವಳು.

No comments:
Post a Comment