Saturday, January 17, 2015

ಸೆಂಟ್ರಲ್ ಸ್ಟಾಪ್

ಆರ್.ಟಿ. ನಗರದಿಂದ ಬಸ್ಸು ಹತ್ತುತ್ತಾ “ಸರ್ ಬಸ್ಸು ಮೆಜಸ್ಟಿಕ್ ಹೋಗುತ್ತಾ” ಅಂತ ಕಂಡೆಕ್ಟರ್ ನ ಕೇಳ್ದೆ. ಆಗ ಅವರು ಒಂದೇ ಸಮನೆ “ಸೆಂಟ್ರಲ್ ಹೋಗಲ್ಲ... ಸೆಂಟ್ರಲ್ ಹೋಗಲ್ಲ” ಅಂತ ರೇಗಿದರು... ಆಗ ನಾನು “ಸರ್ ಸೈಡಲ್ಲಾದರೂ ಪರವಾಗಿಲ್ಲ ಮೆಜಸ್ಟಿಕ್ ಹೋಗುತ್ತಲ್ಲ” ಅಂತ ಕೇಳಿದರೆ, ಕಂಡೆಕ್ಟರ್ ಸಿಟ್ಟಲ್ಲಿ “ರೀ ಸ್ವಾಮಿ ಯಾವ ಊರುರಿ ನಿಮ್ದು...? ಸೆಂಟ್ರಲ್ ಅನ್ನೋದು ಒಂದು ಬಸ್ ಸ್ಟಾಪ್ ಹೆಸರು” ಅಂತ ಹೇಳಿ ಟಿಕೆಟ್ ತುಂಡು ಮಾಡಿಕೊಟ್ರು.

ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment