ಹೆಮ್ಮೆಯಂದದಿ ಅಂದು ನನ್ನ ತಬ್ಬಿದಾಕೆ
ಇಂದು ಕೇಂದ್ರದಲ್ಲಿ ಜಲಸಂಪನ್ಮೂಲ ಮಿನಿಸ್ಟರ್
ಸೊ ನಾನೀಗ ಮಿನಿ-ಸ್ಟಾರ್.
ಇಂದು ಕೇಂದ್ರದಲ್ಲಿ ಜಲಸಂಪನ್ಮೂಲ ಮಿನಿಸ್ಟರ್
ಸೊ ನಾನೀಗ ಮಿನಿ-ಸ್ಟಾರ್.
ಹೌದು ಅಂದೊಂದು ದಿನ ಉಮಾಭಾರತಿಯವರು ಉದಯ ಗರುಡಾಚಾರ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದವರು ಭಾಷಣದಲ್ಲಿ ಅಭ್ಯರ್ಥಿಯ ಹೆಸರು ಹೇಳುವಾಗ ಗರುಡಾಚಾರ್ ಪದ ಉಚ್ಚಾರ ಮಾಡಲು ಆಗದೆ ತಡವರಿಸುತ್ತಿದ್ದಾಗ.., ಅವರ ಎದುರು ನಿಂತು ಫೋಟೊ ತೆಗೆಯುತ್ತಿದ್ದ ನಾನು ಹಿಂದಿಯಲ್ಲಿ ಹೇಳಿದೆ. "ಮೇಮ್ ಜಿ ಕುಚ್ ನಹಿ ಜಿ ಆಪ್ ಕೊ ಗರುಡ ಮಾಲೂಮ್ ಹೈನಾ..... ಪಹ್ಲೆ ಗರುಡ ಬೋಲೊ ಬಾದ್ ಮೆ ಏಕ್, ದೋ, ತೀನ್ ಕ ಚಾರ್ ಬೋಲೋಜಿ ಅಂತ ಹೇಳುವಷ್ಟರಲ್ಲಿ ಒಂದು ಕ್ಷಣ ಹೆಮ್ಮಯಿಂದ ತಬ್ಬಿಕೊಂಡಿದ್ದರು.


No comments:
Post a Comment