ಗಂಡ ಬರುವುದ ಕಂಡ ಸುಮತಿ
ಗೋಡೆಗೆ ಅಂಟಿಸಿದ ಛಿತ್ರಪಟವನ್ನು ಹರಿಯದಂತೆ ಗೋಡೆಯಿಂದ ಬೇರ್ಪಡಿಸುತ್ತಿದಳು. ಈ ಬೇರ್ಪಡಿಕೆಯೇ ಹೀಗೆ ಮತ್ತದು ಮೊದಲಂತಾಗದು. ಅಂಟಿಸುವಾಗ ಮುಂದೊಂದಿನದಿ ಬೇರ್ಪಡಿಸಬೇಕಾದಿತೆಂಬ ಯೋಚನೆಯ ಎಳೆಯೂ ಸುಳಿದಿರದು ಮನಕ್ಕೆ. ಒಂದು ಸಲ ಅಂಟಿಸುವವರೆಗೆ ಅಂಟುವ ಆಕರ್ಷಣೆ. ಅಂಟಿದ ಮೇಲೆ ನಂಟಿಲ್ಲದೆ ಬೇರ್ಪಡಿಸಬೇಕೆಂದರೆ ಅತ್ತ ಬೇರೂರಿದ್ದನ್ನು ಬೇರ್ಪಡಿಸಲೂ ಆಗದೆ ಅಂಟಿ ತಾ ನಿಲ್ಲಲೂ ಆಗದೆ ನೇತಾಡುತ್ತಿರುತ್ತದೆ. ಸಂಬಂಧಗಳೇ ಹೀಗೆನ್ನುತ ಕೊರಗುತ್ತಿತ್ತು ಸುಮತಿಯ ಮತಿ.
ಗಂಡ ಮನೆಯೊಳಗೆ ಬಂದ. ಮನೆಯ ಹೊರಗೆ ನಿಂತಿರುವ ಹೆಂಡತಿ ಮನದೊಳಗೂ ಕಾಲಿಡಲಿಲ್ಲ. ಮನಸ್ಸು ಹಿಂಸೆಯಾದಾಗ ಗಂಟಲು ಒಣಗಿ ಮರುಭೂಮಿಯಾಗುತ್ತದೆ. ನೀರು ಕುಡಿದರೆ ಇಳಿವ ನೀರಿನಲ್ಲೂ ಗಂಟಲಿಗೆ ಪರಕೀಯ ಭಾವ ಕಾಡುತ್ತದೆ.
ಒಣಗಿದ ಗಂಟಲು ಒಣಗಿದಂಗೇ ಇರುತ್ತದೆ. ಈ ಪರಕೀಯತೆ ಅನ್ನುವುದು ಅಷ್ಟು ಸುಲಭಕ್ಕೆ ಸ್ವಕೀಯತೆ ಆಗದು ಎಂದು ಕೊರಗುತ್ತಿದ್ದ ಸುಮತಿಯ ಪತಿ ನಾರಾಯಣ.
ಒಣಗಿದ ಗಂಟಲು ಒಣಗಿದಂಗೇ ಇರುತ್ತದೆ. ಈ ಪರಕೀಯತೆ ಅನ್ನುವುದು ಅಷ್ಟು ಸುಲಭಕ್ಕೆ ಸ್ವಕೀಯತೆ ಆಗದು ಎಂದು ಕೊರಗುತ್ತಿದ್ದ ಸುಮತಿಯ ಪತಿ ನಾರಾಯಣ.
ಮದುವೆ ಆಗಿ ಏಳು ತಿಂಗಳಾಗುತ್ತಾ ಬಂತು ಅಷ್ಟರಲ್ಲೇ ಪರಸ್ಪರರ ಸಂಬಂಧದ ಹಸಿವು ಬಡವಾಯ್ತೇ.....! ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ. ಆದರೆ ಇಲ್ಲಿ ಉಂಡು ಮಲಗಿದಾಗಲೇ ಜಗಳ ಆರಂಭ ಆದರೆ......?
ಸಂಬಂಧಗಳು ಅದು ತನ್ನ ಸ್ವಂತ ಸಂಪಾದನೆ ಅಥವಾ ವರವಾಗಿ ಬಂದ ಸಂಪತ್ತಾಗಬೇಕು. ಇಲ್ಲದೆ ಹೋದರೆ ಮನಸಲ್ಲಿ ಬೆಲೆ ಇಲ್ಲದೆ ಹೃದಯದಲ್ಲಿ ನೆಲೆ ಇಲ್ಲದೆ ಹಗುರಾಗಿ ಜಾರಿ ಹೋಗುತ್ತದೆ.
ಇಲ್ಲಿ ಸುಮತಿಗೆ ನಾರಾಯಣ, ನಾರಾಯಣಗೆ ಸುಮತಿ ಪರಸ್ಪರರು ಸಂಪತ್ತಿನ ಸಂಬಂಧವಾಗದೆ ಬೆಲೆ ನೆಲೆ ಇಲ್ಲದೆ ಜಾರಿ ಹೋಗಲೂ ಆಗದೆ ಹಗುರಾಗಿದ್ದರು.
ಮಲಗುವುದು ಒಂದೇ ಹಾಸಿಗೆಯಲ್ಲಾದರೂ ಬೆನ್ನುಗಳೆರಡು ಅಂಟಿಕೊಂಡವೇ ವಿನಃ ಎದೆಗೆದೆ ಅಂಟಲೇ ಇಲ್ಲ.
ಸುಮತಿಯ ಪತಿ ನಾರಾಯಣಗೆ ಏನ ಮಾಡಲೂ ತೋಚದೆ ಊರಲ್ಲಿರುವ ಅಮ್ಮನಿಗೆ ದಿನಾಲು ಫೋನ್ ಮಾಡಿ ದೂರಿಡುತ್ತಿದ್ದನು. ಅಮ್ಮನಿಗೂ ಕೇಳಿ ಬೇಸರ ಆಗಿ ಒಂದುದಿನ ಮಗನಿಗೆ ಒಂದು ಪ್ರಶ್ನೆ ಕೇಳುತ್ತಾಳೆ. ಮಗನೆ ನಾನು ನಿನಗೆ ನಿನ್ನ ಬಾಲ್ಯದಿಂದ ಎಷ್ಟು ಸಲ ಹೊಡೆದಿದ್ದೆ ನಿನ್ನೊಡನೆ ಕೋಪ ಮಾಡಿಕೊಂಡು ಮಾತೇ ಬಿಡುತ್ತಿದ್ದೆ. ಆಮೇಲೆ ನಾನೇ ಊಟ ಮಾಡಿಸುತ್ತಿದ್ದೆ ಆದರೂ ಏನೇ ಆದರೂ ಯಾಕೆ ನೀನು ನನ್ನಲ್ಲಿ ಇವತ್ತಿಗೂ ಮಾತು ಬಿಡದೆ ಸಂಬಂಧ ಉಳಿಸಿಕೊಂಡಿದ್ದೀಯಾ.....?
ಏನಮ್ಮ ನೀನು ದಡ್ಡಿ ತರ ಮಾತಾಡ್ತಿಯಲ್ಲ ಹಾಗೆಲ್ಲ ನಿನ್ನಲ್ಲಿ ಮಾತು ಬಿಟ್ಟು ಸಂಬಂಧ ಮುರಿಯುವುದಕ್ಕೆ ಸಾಧ್ಯಾನಾ... ನೀನು ನನ್ನ ಅಮ್ಮ ಅಲ್ವಾ.... ಅಮ್ಮನತ್ತಿರ ಕೋಪ ಮಾಡುವುದುಂಟೆ..?
ಆಗ ಅಮ್ಮ ಆ ಕಡೆಯಿಂದ ಸರಿ ಹಾಗಾದರೆ ನೀನು ಫೋನಿಡು. ಯಾಕಮ್ಮ ಏನಾಯ್ತು.... ಎಂದು ಕೇಳುವುದರಷ್ಟರಲ್ಲಿ ಅಮ್ಮ ಫೋನ್ ಕಟ್ ಮಾಡಿದ್ದರು.

ನಾರಾಯಣಗೆ ಅಮ್ಮನ ವರ್ತನೆ ಗೊತ್ತೇ ಆಗದೆ ಮನದಲ್ಲೊಂದು ಪ್ರಶ್ನೆ ಹುಟ್ಟಿಕೊಂಡಿತು.
ಮನುಷ್ಯನಿಗೆ ಪ್ರಶ್ನೆ ಹುಟ್ಟಬೇಕು ಉತ್ತರ ಹುಡುಕಬೇಕು. ಸಿಕ್ಕ ಉತ್ತರ ಸರಿಯೆಂದು ತೃಪ್ತನಾಗದೆ ಮತ್ತೆ ಮತ್ತೆ ಹುಡುಕಬೇಕು. ಮೊದಲು ಸಿಕ್ಕ ಉತ್ತರಕ್ಕಿಂತ ಮತ್ತೆ ಮತ್ತೆ ಸಿಗುತ್ತಾ ಹೋಗುವ ಉತ್ತರಗಳೆಲ್ಲಾ ಪಕ್ವ ಎಂದಾಗುತ್ತಾ ಹೋಗುತ್ತದೆ. ಆದರೂ ಬದುಕಲ್ಲಿ ಮೊದಲು ಸಿಕ್ಕ ಉತ್ತರದ ಬಗ್ಗೆನೇ ಒಲವು ಹೆಚ್ಚು. ಹಾಗಾಗಿ ಕೆಲವರು ಅಲ್ಲಿಂದ ಮುಂದೆ ಹೋಗದೆ ಪಕ್ವತೆಯನ್ನು ಪಡಯಲಾರದೆ ಹೋಗುತ್ತಾರೆ. ಬೆನ್ನಿಗೆ ಬೆನ್ನಂಟಿ ಮಲಗಿದ್ದ ನಾರಾಯಣ ಎದ್ದು ಸ್ನಾನ ಮಾಡುತ್ತಿರುವಾಗ ಹುಟ್ಟಿದ ಪ್ರಶ್ನೆಗೆ ಒಂದು ಉತ್ತರ ಹುಟ್ಟಿತು.
ಹೌದು ಜಗತ್ತಿನ ಮಾಹಾನ್ ಪ್ರಶ್ನೆಗಳಿಗೆಲ್ಲಾ ಉತ್ತರ ಹುಟ್ಟಿದ್ದು ಸ್ನಾನ ಮಾಡುವಾಗಲೇ. ಸ್ನಾನ ಮಾಡುವಾಗ ತಲೆಯ ಹಿಂಭಾಗಕ್ಕೆ ನೀರು ಬಿದ್ದಾಗ ಮೆದುಳು ಚುರುಕಾಗುತ್ತದೆ. ಅದರಲ್ಲೂ ತಣ್ಣೀರು ಬಿದ್ದರಂತೂ ಇನ್ನೂ ಚುರುಕಾಗುತ್ತದೆ. ಇದೇ ಕಾರಣಕ್ಕೆ ಸ್ನಾನ ಮಾಡುವಾಗ ಎಂಥವನು ಕೂಡ ಹಾಡಲಾರಂಭಿಸುತ್ತಾನೆ. ಹಾಡುವುದಕ್ಕೆ ಇನ್ನೊಂದು ಕಾರಣವೂ ಇದೆ. ಮುಚ್ಚಿದ ಸ್ನಾನದ ಮನೆಯಲ್ಲಿ ಒಂದು ಬೇರಾರು ಇರಲಾರರು ಎಂಬ ಧೈರ್ಯ ಒಂದೆಡೆಯಾದರೆ ಇನ್ನೊಂದು ಸ್ವರದ ಪ್ರತಿಧ್ವನಿ ನಮ್ಮನ್ನು ಹಾಡುವಂತೆ ಪ್ರೇರೇಪಿಸುತ್ತದೆ. ನಾರಾಯಣ ಸ್ನಾನ ಮುಗಿಸಿ ಬಂದವನೇ ಅಮ್ಮನಿಗೆ ಫೋನ್ ಮಾಡಿ, ಅಮ್ಮ ನನಗೆ ಉತ್ತರ ಸಿಕ್ತು. ನಾನೂ ನಿನ್ನಂತೆ ಅಮ್ಮ ಆಗ್ತಾ ಇದ್ದೀನಿ. ನನ್ನ ಹೆಂಡತಿಗೆ ನಾನೀಗ ಅಮ್ಮ ಆಗ್ತಾ ಇದ್ದೀನಿ.

ಅಮ್ಮನಿಗೆ ಮಗನ ಮೂರ್ಖತನದ ಬಗ್ಗೆ ನಗು ಬಂದು ಮಗನೇ ಅಮ್ಮ ಆಗೋದಂದರೆ ಅಷ್ಟು ಸುಲಭ ಅಂದುಕೊಂಡಿಯೇನೊ. ರಾತ್ರಿಯಿಂದ ಬೆಳಗಾಗೊದೊರಳಗೆ ಅಮ್ಮ ಆಗುವಂತಿದ್ದರೆ ಇವತ್ತು ಜಗತ್ತು ಹೀಗಿರುತ್ತಿರಲಿಲ್ಲ ಮಗನೇ.
ಒಂದು ಜೀವ ಅಮ್ಮ ಆಗುವುದೆಂದರೆ ಅದು ಒಂದು ಕ್ಷಣದ ಕೆಲಸ ಅಲ್ಲ ಮಗನೆ. ನಾನು ನನ್ನಮ್ಮನನ್ನು ಅಮ್ಮಾ ಎಂದು ಕರೆಯಲು ಕಲಿತ ಬಾಲ್ಯದಲ್ಲೇ ಒಂದು ಮರದ ತುಂಡನ್ನು ಹಿಡಿದುಕೊಂಡು ಎದೆಗಪ್ಪಿಕೊಂಡು ಹಾಲುಣಿಸುವ ಹಾಗೆ ಕನಸು ಕಾಣುತ್ತಿದ್ದೆ. ತೊಡೆ ಮೇಲೆ ಮಲಗಿಸಿ ಸ್ನಾನ ಮಾಡಿಸುತ್ತಿದ್ದೆ. ತೊಡೆಸಂದಿಯಲ್ಲಿ ಅದುಮಿಟ್ಟು ಮುದ್ದು ಮಾಡುತ್ತ ಮದ್ದು ಕುಡಿಸುತ್ತಿದ್ದೆ. ಅಂದರೆ ಅಮ್ಮ ಎಂಬ ಒಂದು ಪದಬಿಟ್ಟು ಬೇರೆ ಪದದ ಉಚ್ಚಾರಕ್ಕೂ ಒದ್ದಾಡುವ ಪ್ರಾಯದಲ್ಲೇ ಅಮ್ಮನಾಗುವ ಕನಸಕಟ್ಟಿಕೊಂಡೆ. ಅಲ್ಲಿಂದ ಬದುಕಿನ ಪ್ರತಿ ಹಂತದಲ್ಲೂ ಅಮ್ಮನಾಗಬಯಸಿದೆ. ತನ್ನ ನಂತರದಲ್ಲಿ ಹುಟ್ಟಿದ ತಂಗಿಗೆ ಮತ್ತೆ ತಮ್ಮಂಗೆ, ಪಕ್ಕದ ಮನೆಯ ಮಗುವಿಗೆ ತಾನು ಅಮ್ಮನಂತಾಗುತ್ತಾ ಹೋದೆ. ಆದರೆ ಅಮ್ಮನಾಗಲಿಲ್ಲ. ಅಲ್ಲಿಂದ ಮುಂದೆ ಪ್ರೌಢಾವಸ್ಥೆಗೆ ಕಾಲಿಡುವಾಗ ನನ್ನ ಬದುಕಿನಲ್ಲಾದ ಮೊಟ್ಟಮೊದಲ ಮುಟ್ಟನ್ನು ನಾನು ಅಮ್ಮ ಆಗಲು ಪಡೆದುಕೊಂಡ ಅರ್ಹತೆ ಎಂದು ಸಂಭ್ರಮಿಸಿದೆ.
ನನ್ನ ಪ್ರಾಯದ ಹುಡುಗನ ಕಂಡಾಗ ಇವ ನನಗೆ ಗಂಡನಾಗಿ ನನ್ನನ್ನು ಅಮ್ಮ ಮಾಡಬಲ್ಲನೇ ಎಂದು ನನ್ನಲ್ಲೇ ನಾನು ಮಾತಾಡುತ್ತಿದ್ದೆ.... ನಾಚುತ್ತಿದ್ದೆ.... ನನ್ನ ಗರ್ಭದಲ್ಲಿ ಹುಟ್ಟುವ ಮಗುವಿಗೆ ಕಾರಣನಾಗುವ ಗಂಡು ಇನ್ನೂ ಕಾಣುತ್ತಿಲ್ಲವಲ್ಲಾ ಎಂದು ಕೊರಗುತ್ತಿದ್ದೆ. ಶುರುವಾಯ್ತು ಹುಡುಗಿ ನೋಡಲೆಂದು ಬಂದರು ಮನೆಗೆ. ಆಸೆಯಿಂದಲೇ ಅಮ್ಮನ ಸೀರೆಯುಟ್ಟು, ತಲೆಗೆ ಮಲ್ಲಿಗೆಯಿಟ್ಟು, ಕೈ ತುಂಬಾ ಬಳೆ ತೊಟ್ಟು, ತಟ್ಟೆಯಲ್ಲಿ ತುಂಡು ಬೆಲ್ಲವನ್ನಿಟ್ಟು, ಚೊಂಬಿನಲಿ ಬೆಲ್ಲ ಕರಗಿಸಬಲ್ಲ ನೀರನ್ನಿಟ್ಟು ನಡುಗುವ ಕೈಗಳ ಬಳೆಗಳ ನಾದದೊಡನೆ ಅಮ್ಮನಾಗುವ ಆಸೆಯನ್ನಿಟ್ಟು ಹುಡುಗನ ಕೈಗೆ ಬೆಲ್ಲ ನೀರನ್ನು ಕೊಡಲು ಹೋದಾಗ ನೀರು ಚೆಲ್ಲಿ ಬೆಲ್ಲ ಒದ್ದೆಯಾಗುತ್ತಿತ್ತು. ಮೆಲ್ಲನೆ ಬೆಲ್ಲ ಸವಿದ ಹುಡುಗನ ಕಡೆಯಿಂದ ಬರುವ ಉತ್ತರಕ್ಕೆ ಅರ್ಧ ತೆರೆದ ಕಿಟಕಿಯ ಸರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕಾಯುತ್ತಿದ್ದೆ.
ಹುಡುಗ ಒಪ್ಪಿದರೆ ಹುಡುಗನ ಅಪ್ಪ ಒಪ್ಪುತ್ತಿರಲಿಲ್ಲ. ಇಬ್ಬರೂ ಒಪ್ಪಿದರೆ ಹುಡುಗನ ಅಮ್ಮ ಒಪ್ಪುತ್ತಿರಲಿಲ್ಲ. ಹೀಗೆ ಒಂದೊಂದೇ ಕಾರಣಕ್ಕೆ ನನ್ನ ಮನದಿ ಅಮ್ಮನಾಗುವ ಆಸೆಗಳೆಲ್ಲಾ ಬೆಲ್ಲದೆಂತೆ ಕರಗುತ್ತಿದ್ದವು. ಸಿಹಿಯನ್ನೂ ಕೊಡದೆ. ಪ್ರತಿ ಹಂತದಲ್ಲೂ ಕಾಡುತ್ತಿತ್ತು ಅಮ್ಮನಾಗುವುದು ಅಷ್ಟು ಸುಲಭ ಇಲ್ಲ ಎಂದು. ಹತ್ತೊಂಭತ್ತು ಬೆಲ್ಲದ ತುಂಡುಗಳು ಕರಗಿಹೋದ ಮೇಲೊಂದು ಇಪ್ಪತ್ತನೇ ಬೆಲ್ಲದ ಸಿಹಿಯನ್ನು ಸವಿಯಲು ನನಗೂ ಅವಕಾಶ ಸಿಕ್ಕಿತು. ಮದುವೆ ಆಯ್ತು. ಮದುವೆ ಆದ ಮೇಲೆ ಇನ್ನೇನು ಅಮ್ಮ ಆಗಿಯೇಬಿಟ್ಟೆನೆಂದುಕೊಂಡೆ, ಗಂಡನ ದೇವರೆಂದುಕೊಂಡೆ. ಮದುವೆಯಾದ ಇಪ್ಪತ್ತನೇ ದಿನದಲ್ಲಿ ಮುಟ್ಟು ಆದಾಗ ಆ
ಕ್ಷಣ ನಾನು ಅಕ್ಷರಸಃ ಸತ್ತೇ ಹೋದೆ. ಅಮ್ಮನಾಗುವುದು ಅಷ್ಟು ಸುಲಭವಲ್ಲ. ಬಾಲ್ಯದಲ್ಲಿ ಮರದ ತುಂಡೊಂದನ್ನು ಮಗುವೆಂದು ಮುದ್ದು ಮಾಡಿದಷ್ಟು ಸುಲಭವಲ್ಲ.
ಅಂತೂ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಒಂದುಸಲ ನಲ್ವತ್ತೈದು ದಿನ ಆದರೂ ಮುಟ್ಟಾಗಲಿಲ್ಲ ಎಂದಾಗ ಪಟ್ಟ ಸಂತೋಷ ಇದಿಯಲ್ಲಾ ಅದು ಅಷ್ಟಿಷ್ಟಲ್ಲ. ಆದರೆ ಆ
ಮುಟ್ಟು ಗರ್ಭಕಟ್ಟಿದ ಮುಟ್ಟಲ್ಲ ಎಂದು ಗೊತ್ತಾಗಲು ಹೆಚ್ಚು ದಿನ ಬೇಕಾಗಿರಲಿಲ್ಲ. ಆಮೇಲೆ ಬೇಸರದಲ್ಲಿ ಮುಟ್ಟಿನ ದಿನವನ್ನು ನೆನಪಿಡುವುದನ್ನೇ ಮರೆತೆ. ಅದೊಂದು ದಿನ ಇದ್ದಕ್ಕಿದ್ದಂತೆ ತಲೆ ಸುತ್ತು ಬಂತು. ಎಚ್ಚರಾಗುವಾಗ ಗಂಡ ತಬ್ಬಿಕೊಂಡು ನಿನಗೀಗ ಮೂರು ತಿಂಗಳೆಂದರು. ಆ
ಕ್ಷಣ ನಾನು ಹುಟ್ಟಿದೆ. ಅಲ್ಲಾಡದೆ ಅಲ್ಲೇ ವಿಜೃಂಭಿಸಿದೆ. ತಿಂಗಳು ಉರುಳಿತು, ಗರ್ಭ ತುಂಬಿತು. ಮಗು ಗರ್ಭ ಜಗತ್ತಿಂದ ಹೊರಜಗತ್ತಿಗೆ ಬಂತು. ಅಂದು ನಿರ್ಜೀವ ಮರದ ತುಂಡನ್ನೇ ಮಲಗಿಸಿಕೊಂಡಿದ್ದ ತೊಡೆಯಿಂದು ನನ್ನದೇ ಮಗುವನ್ನು ಮಲಗಿಸಿಕೊಂಡಿದೆ. ಆದರೆ ನಾನಿನ್ನೂ ಅಮ್ಮನಾಗಿಲ್ಲ. ಆ
ಮಗು ಅಮ್ಮಾ ಎಂದು ಕರೆವವರೆಗೆ ಕಾಯಬೇಕೇ....! ಅದೊಂದು ದಿನ ಇದ್ದಕ್ಕಿದ್ದಂತೆ ಮಗು ಅ...
ಅ... ಅಮ್ಮ ಎಂದಾಗ ಓಡಿಹೋಗಿ ಗಟ್ಟಿ ಅಪ್ಪಿಕೊಂಡೆ, ಮಗು ಕೆಮ್ಮಿದಾಗಲೇ ಗೊತ್ತಾಗಿದ್ದು ಮಗುವಿಗೆ ಉಸಿರುಗಟ್ಟುವವರೆಗೆ ಬಿಗಿಯಾಗಿ ಅಪ್ಪಿಕೊಂಡಿದ್ದೆ ಎಂದು. ಬಾಲ್ಯದಿಂದ ಕಟ್ಟಿಕೊಂಡ ಕನಸಿಗೆ ಅಂದು ನಾನು
ಅಮ್ಮ ಆಗುದಕ್ಕೆ ಶುರು ಆದ ದಿನ ಅದು. ಅಂದಿನಿಂದ ಇಂದಿನವರೆಗೆ ಮಗುವಿನ ಎಲ್ಲಾ ತಪ್ಪನ್ನು ತಿದ್ದುತ್ತಾ ಯಾವತ್ತೂ ಕೋಪಮಾಡಿಕೊಳ್ಳದೆ
ಪರಿಪೂರ್ಣ ಅಮ್ಮ ಆಗುವುದಕ್ಕೆ ಶ್ರಮಿಸುತ್ತಿದ್ದೇನೆ. ತಾಯಿಯೇ ದೇವರು ಆದರೆ ಅದು ತನ್ನ ಮಕ್ಕಳಿಗೆ ಮಾತ್ರ....! ತಾಯಿ ದೇವರಾಗಬೇಕು ಜಗತ್ತಿನ ಉಳಿದೆಲ್ಲಾ ಮಕ್ಕಳಿಗೂ. ಅದಕ್ಕೂ ಮೊದಲು ತಾಯಿ ತನ್ನ ಮಗುವಿಗೆ ಮಾತ್ರವಲ್ಲದೆ ಇತರ ಎಲ್ಲಾ ಮಕ್ಕಳಿಗೂ ತಾಯಿಯಾಗಬೇಕು ಎಂದಾಗ ನಾರಾಯಣ ಹೌದು ನನ್ನ ಈ ತಾಯಿ ಖಂಡಿತಾ ದೇವರೇ. ತಾಯಿ ದೇವರೆಂದರೆ ನಾನು ಈ ದೇವರ ಮಗ ಎಂಬ ಹೆಮ್ಮೆಯಿಂದ ತಾನು ಮಾತು ಮುಂದುವರಿಸುತ್ತಾನೆ. ಹೌದಮ್ಮ. ಅಮ್ಮ ತನ್ನ ಮಕ್ಕಳಿಗೆ ಮಾತ್ರ ಅಮ್ಮನಾದರೆ ಸಾಲದು ಪರರ ಮಕ್ಕಳಿಗೂ ಅಮ್ಮನಾಗಬೇಕು. ಅಮ್ಮ ಮಾತ್ರ ಅಮ್ಮನಾದರೆ ಸಾಲದು ಅಪ್ಪನೂ ಅಮ್ಮನಾಗಬೇಕು. ಹೆಂಡತಿ ಗಂಡನಿಗೆ ಅಮ್ಮನಾಗಬೇಕು. ಗಂಡ ಹೆಂಡತಿಗೆ ಅಮ್ಮನಾಗಬೇಕು. ಶಾಲೆಯಲ್ಲಿ ಟೀಚರ್ ಅಮ್ಮನಾಗಬೇಕು. ಒಂದು ಕಛೇರಿಯಲ್ಲಿ ಆಫಿಸರ್ ತನ್ನ ಕೈ ಕೆಳಗಿನ ಕೆಲಸದವರಿಗೆ ಅಮ್ಮ ಆಗ ಬೇಕು. ಒಂದು ಪೊಲೀಸ್ ಠಾಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಅಮ್ಮ ಆಗಬೇಕು. ರಾಜಕಾರಣಿ ಅಮ್ಮ ಆಗಬೇಕು. ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಅಮ್ಮ ಆಗಬೇಕು. ಆಗ ಇಡೀ ದೇಶದ ಪ್ರಜೆಗಳು ಒಂದೇ ತಾಯಿಯ ಮಮತೆಯಲ್ಲಿ ಬದುಕಬಲ್ಲರು. ಅಮ್ಮ ನಾನೀಗ ಎಲ್ಲಾ ತಪ್ಪನ್ನು ತಿದ್ದುವ ಯಾವತ್ತೂ ಕೋಪಮಾಡಿಕೊಳ್ಳದೆ
ಪರಿಪೂರ್ಣ ಅಮ್ಮನಾಗುವುದಕ್ಕೆ ಹೊರಟೆ.
ಪಡೆವ ಮಕ್ಕಳಿಗೆ ಅಮ್ಮನಾಗಬೇಕಾದರೆ ಇನ್ನೊಂದು ಜೀವದ ಹಂಗು ಬೇಕು. ಇರುವ ಮಕ್ಕಳಿಗೆ ಅಮ್ಮನಾಗಬೇಕಾದರೆ ಯಾರ ಹಂಗೂ ಬೇಡ. ನನ್ನೊಳಗೆ ನಾನು ಅಮ್ಮನ ತನವನ್ನು ತುಂಬಿಸಿಕೊಂಡರೆ ಸಾಕು. ನಾನೀಗ ಅಮ್ಮನಾಗುತ್ತಿದ್ದೇನೆ ಮತ್ತೆ ನೀವು......?

No comments:
Post a Comment