Thursday, January 15, 2015

ಟೈ ನೂಲಾದ ಜನಿವಾರ

ಜನಿವಾರ ಈಗ ಟೈನೂಲಾಗಿದೆ. ಅದೇ ನೋಡಿ ಗೆಲ್ಲುವುದಕ್ಕಿಂತಲೂ ಅನಿವಾರ್ಯ ಟೈ ಮಾಡಿಕೊಳ್ಳೊದೇ ಬದುಕಾಗಿದೆ.
ಪ್ರತಿವರ್ಷದಂತೆ ನೂಲ ಶ್ರಾವಣದಂದು ಜನಿವಾರ ಧಾರಣೆ ಮಾಡಲೆಂದು ಮೊನ್ನೆ ಊರಿಗೆ ಹೋಗಿದ್ದೆ ಅಪ್ಪನ ಅಪ್ಪಣೆಯ ಮೇರೆಗೆ. ಎಡದ ಹೆಗಲ ಮೇಲಿಂದ ಇಳಿಯಬಿಟ್ಟರೆ ಬಲದ ಕೈ ಜನಿವಾರದೊಳಗಿರಬೇಕು, ಎಡದ ಕೈ ಜನಿವಾರದ ಹೊರಗಿರಬೇಕು ಇದು ಕ್ರಮ. ಹೀಗೆ ಪ್ರತೀ ವರ್ಷದ ಜನಿವಾರದಲ್ಲೂ ಒಂದು ತರಹದ ಹಿತ ಇರುವುದು ಆದರೆ ಸಲ ಯಾಕೋ ಕಿರಿ ಕಿರಿ ಅನ್ನಿಸಿತು. ಗಮನಿಸಿ ನೋಡಿದರೆ ಜನಿವಾರದ ನೂಲು ಹತ್ತಿಯದ್ದಾಗಿರಲಿಲ್ಲ ಬದಲಾಗಿ ನೈಲಾನಿನ ಜಾತಿಯ ಟೈ ನೂಲಾಗಿದೆ. ಇದರ ಬಗ್ಗೆ ಪುರೋಹಿತರ ಬಳಿ ಕೇಳಿದರೆ. ಇನ್ನು ಪರಂರೆಯ ನೂಲಿಗೆ ಹೆಚ್ಚು ಆಯುಷ್ಯ ಇಲ್ಲ. ಟೈ ನೂಲಿನ ಜನಿವಾರ ಹಾಕಿದ್ರೆ ಒಂದುವೇಳೆ ನೀವು ಬರುವ ವರ್ಷ ಬರದೇ ಇದ್ದರೂ ಎರಡನೇ ವರ್ಷಕ್ಕೆ ಮುಂದುವರಿಸುವಷ್ಟು ಕ್ವಾಲಿಟಿ ಎಂದರು. ಹೌದು ಕ್ವಾಲಿಟಿ ಗುಟ್ಟು ಗೊತ್ತಾಗಿದ್ದು ಬೆನ್ನುಜ್ಜಿಕೊಳ್ಳವಾಗ. ಜನಿವಾರವನ್ನು ಜಪ ಮಾಡುವುದಕ್ಕಲ್ಲದೆ ಬೇರೆ ಯಾವುದಕ್ಕೂ ಬಳಕೆ ಮಾಡಕೂಡದೆಂದು ವೃತ ಉಪದೇಶ ಮಾಡುವಾಗ ಗುರುಗಳು ಉದಾಹರಣೆ ಕೊಟ್ಟೇ ಹೇಳಿದ್ದರು. ಗೊತ್ತಿರಲಿಲ್ಲ ಸ್ನಾನ ಮಾಡುವಾಗ ಜನಿವಾರದಲ್ಲಿ ಬೆನ್ನುಜ್ಜಿಕೊಳ್ಳಲೂ ಆಗುತ್ತದೆಂದು. ಗುರುಗಳೇ ಹೇಳಿದ್ದು ಹಾಗೆ ಮಾಡಬಾರದೆಂದು. ಆಗಲೇ ಆಸೆ ಹುಟ್ಟಿದ್ದು ಒಂದು ಸಲ ಮಾಡಿಯೇ ನೋಡೋಣವೆಂದು.
ಗುರುಗಳ ಮಾತು ಮೀರಿದರೆ ತನ್ನ ಬೆನ್ನಿಗೇ ಗಾಯ ಗ್ಯಾರಂಟಿ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:

Post a Comment