ಒಂದು ಪಾತ್ರೆಯಲ್ಲಿ ಎರಡು ಆಲುಗೆಡ್ಡೆ ಮುಳುಗುವಷ್ಟು ನೀರಾಕಿ ಬೇಯಲಿಡಿ.
ಪೋನ್ ಕೈಗೆತ್ತುಕೊಂಡು ನಿಮ್ಮ ಮನದೊಡೆಯರಿಗೆ ಕರೆ ಮಾಡಿ ಆಲುಗೆಡ್ಡೆ ಬೇಯುವವರೆಗೆ ಸ್ವಲ್ಪ ಪುಂಡಿ ಬೇಯಿಸಿ.
ಬೆಂದ ಆಲುಗಡ್ಡೆಯನ್ನು ಬದಿಗಿಡಿ. ಒಂದು ಕಾಲಿ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮನಸಿಟ್ಟು ಮೆಣಸು ಫ್ರೈ ಮಾಡಿ. ಆಮೇಲೆ ಒಂದೊಂದೇ ಐಟಂ ಹಾಕಿ ಫ್ರೈ ಮಾಡಿ.ಪೋನ್ ಕೈಗೆತ್ತುಕೊಂಡು ನಿಮ್ಮ ಮನದೊಡೆಯರಿಗೆ ಕರೆ ಮಾಡಿ ಆಲುಗೆಡ್ಡೆ ಬೇಯುವವರೆಗೆ ಸ್ವಲ್ಪ ಪುಂಡಿ ಬೇಯಿಸಿ.
ಉದ್ದು
ಜೀರಿಗೆ
ಸಾಸಿವೆ
ಕೊತ್ತಂಬರಿ ಬೀಜ
ಅಕ್ಕಿ
ಮೆಂತ್ಯ
ಹಿಂಗು
ಬೇವಿನ ಎಲೆ
ಎಳ್ಳು- ನೀರು ಬಿಡ ಬೇಡಿ
ಫ್ರೈ ಮಾಡಿದ ಎಲ್ಲಾ ಐಟಂಗಳನ್ನು ಕುಟ್ಟಿ ಪುಡಿ ಮಾಡಿ ಅಜ್ಜಿ ಮಾಡಿದ ಹಾಗೆ.
ಆಲುಗಡ್ಡೆ ಸಿಪ್ಪೆ ತೆಗೆದು ಪೀಸ್ ಪೀಸ್ ಮಾಡಿ ಹಿಚುಕಿರಿ. ಹಿಚುಕಿದ್ದನ್ನು ಈ ಸಲ ಬಲ ಬದಿಗಿಡಿ.
ಬಾಣಲೆಯಲ್ಲಿ ಒಗ್ಗರಣೆ ತಯಾರು ಮಾಡಿ ಫ್ರೈ ಮಾಡಿ ಕುಟ್ಟಿ ಪುಡಿ ಮಾಡಿದ ಮಸಾಲೆಯನ್ನು ಒಗ್ಗರಣೆಗೆ ಹಾಕಿ, ಹಿಚುಕಿದ ಆಲುಗಡ್ಡೆಯನ್ನೂ ಒಗ್ಗರಣೆ ಜೊತೆ ಹಾಕಿ. ಸ್ವಲ್ಪ ನಿಧಾನಕ್ಕೆ ಅಲ್ಲಾಡಿಸಿ.
ಅಲ್ಲಾಡಿಸಲು ಕಷ್ಟ ಆಗುವ ತನಕ ಅಲ್ಲಾಡಿಸಿ...... ಸಾಧ್ಯವೇ ಇಲ್ಲ ಎಂದಾಗ ಅದಕ್ಕೆ ಮೊಸರು ಹಾಕಿ ಮತ್ತೆ ಸ್ವಲ್ಪ ಅಲ್ಲಾಡಿಸಿ.
ಫೈನಲ್ ಆಗಿ
ಕಾಯಿ ಮೆಣಸು ಉದ್ದಕ್ಕೆ ಕತ್ತರಿಸಿ ಹಾಕಿ.
★ ಹುಡುಗರೆ ಎಚ್ಚರ......ಮೆಣಸಿನಕಾಯಿ ಕತ್ತರಿಸಿದ ಕೈಯನ್ನು ತೊಳೆಯದೆ ಸ ಸಾ ಸಿ ಸೀ "ಸು-ಸೂ" ಮಾಡಕ್ಕೆ ಹೋಗಬೇಡಿ.
ತಮಾಷೆನೇ ಅಲ್ಲ ತಡ್ಕೊಳ್ಳಕೆನೇ ಸಾಧ್ಯ ಇಲ್ಲಪ್ಪ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:
Post a Comment