ಬದುಕಲ್ಲಿ ಯಾವುದೂ ಕೂಡ ಸರಾಗವಾಗಿ ಸುಲಭವಾಗಿ ಸಿಗುವಂತಿರಬಾರದು.
ಕಷ್ಟ ಪಟ್ಟೇ ಕೈಗೆಟುಕಬೇಕು. ಉಸಿರಾಟದ ತೊಂದರೆ ಇದ್ದಾಗ ಪ್ರತಿ ಉಸಿರು ಕೂಡ ಪ್ರಾಣಾಯಾಮವಾಗುತ್ತದೆ. ಇಲ್ಲದೇ ಇದ್ದರೇ ಉಸಿರಾಡುತ್ತಿದ್ದೇವೆ ಎಂಬುವುದರ ಬಗ್ಗೆ ಅರಿವು ಕೂಡ ಇರಲಾರದು.
ಸಮಸ್ಯೆ ಹುಟ್ಟಬೇಕು ನಮಗೆ. ಹಾಗಂತ ಸಮಸ್ಯೆಯ ಜೊತೆಗೆ ಖಂಡಿತಾ ಬದುಕಬಾರದು. ಹುಟ್ಟಿದ ಸಮಸ್ಯೆಯನ್ನು ಬಹು ಶೀಘ್ರವಾಗಿ ಪರಿಹರಿಸಿ ಹೊಸ ಸಮಸ್ಯೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದೇ ಇದ್ದರೆ ಒಂದೇ ಸಮಸ್ಯೆಯ ಜೊತೆಗೆ ಬದುಕು ಪೂರ್ತೀ ಬದುಕದೆ ಸಾಯ್ತೀವಿ.

No comments:
Post a Comment