⭕ಕೆ.ಪಿ.ಎನ್ (ಕರ್ನಾಟಕ ಫೋಟೋ ನ್ಯೂಸ್)ಸಂಸ್ಥೆಯಲ್ಲಿ ಗುರು ಸಾಗ್ಗೆರೆ ರಾಮಸ್ವಾಮಿಯವರ ವಿದ್ಯಾರ್ಥಿಯಾಗಿ
ನಾಲ್ಕೂವರೆ ವರ್ಷ ಪ್ಯೂರ್ ಫೋಟೋಜರ್ನಲಿಸಂ ಕಲಿಯಲು ಕಲಿತೆ. ವೇತನದ ಜೊತೆ ಜೀವನ ಅರಿತೆ.
⭕ಅಲ್ಲಿಂದ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಸೇರಿ, ನಾಲ್ಕು ವರ್ಷ ಕಲಿಯುತ ದುಡಿದೆ. ಕಲಿತ ವಿದ್ಯೆ ಪ್ರಯೋಗಿಸಿ ಬಲಿತೆ.
⭕ಈಗ ಮುಂದು ಬಂದು ದಿ ಹಿಂದು ಸೇರಿಕೊಂಡೆ. ದಿ ಹಿಂದು-ಮಹಾ ಸಾಗರವಿದು ಎಂಬ ಅರಿವಿದೆ. ನದಿಯಲೀಜಿದವಗೆ ಸಾಗರದಲೀಜುವ ಭಯವೂ ಇದೆ. ಆ ಭಯವೇ ಮುಳುಗದೆ ನಿರಂತರ ಈಜುಲು ಛಲವ ಕೊಡುವುದೆಂಬ ನಂಬಿಕೆಯಿದೆ.

ತೊಂಬತ್ತೊಂಬತ್ತು ಹಾವನ್ನು ಹಿಡಿದ ಅನುಭವ ಇದ್ದರೂ ಕೂಡ ನೂರನೇ ಹಾವನು ಹಿಡಿವಾಗ ಬದುಕಲಿ ಮೊದಲ ಹಾವನ್ನು ಹಿಡಿವಾಗ ಇದ್ದ ಭಯ, ಭಕ್ತಿ, ಶೃದ್ಧೆ ಇರಬೇಕು. ಹೇ ಇಲ್ಲಪ್ಪ ತಾನು ಈವರೆಗೆ ತೊಂಬತ್ತೊಂಬತ್ತು ಹಾವು ಹಿಡಿದಿರುವೆನು ಇದು ಯಾವ ಲೆಕ್ಕ ಎಂಬ ಅಹಂನಿಂದ ನೂರನೇ ಹಾವನು ಹಿಡಿಯಲು ಹೋದರೆ ಸತ್ತೇ ಹೋಗುವೆ. ಗುರು ಸಾಗ್ಗೆರೆ ರಾಮಸ್ವಾಮಿಯವರು ನನಗೆ ಮೊದಲ ದಿನ ಮಾಡಿದ ಪಾಠ. ನೂರಲ್ಲ ಸಾವಿರ ದಾಟಿದರೂ ಮೊದಲ ದಿನದ ಭಯ-ಭಕ್ತಿ ಶೃದ್ಧೆಯನ್ನಿರಿಸುವೆ.
ಆಶೀರ್ವಾದ ನಿಮ್ಮದು ಪರಿಶ್ರಮ ನನ್ನದು.
ಆಶೀರ್ವಾದ ನಿಮ್ಮದು ಪರಿಶ್ರಮ ನನ್ನದು.

No comments:
Post a Comment