Monday, January 26, 2015

ಮುಳ್ಳನಪ್ಪಿದ ಬಟ್ಟೆ

ಮುಳ್ಳಿನ ಮೇಲೆ ಬಟ್ಟೆ ಬಿದ್ದರೂಬಟ್ಟೆ ಮೇಲೆ ಮುಳ್ಳೇ ಬಿದ್ದರೂ ಹರಿಯೋದು ಬಟ್ಟೆನೇ......!
ಈಗ ಮುಳ್ಳಿನ ಮೇಲೆ ಬಿದ್ದ ಬಟ್ಟೆಯನ್ನು ತೆಗೆದರೆ ಮಾತ್ರ ತಾನೇ ಹರಿಯೋದು. ತೆಗೆಯದೇ ಇದ್ದರೆ...!
ತೂತಷ್ಟೇ ಆದ ಬಟ್ಟೆ ಹರಿಯದೆ ಮುಳ್ಳಿನೊಡನೇ ಬದುಕ ಮಾಡೀತು.
ಅಷ್ಟೇ ಅಲ್ಲದೆ ಇನ್ನೆಂದೂ ಇನ್ನೊಂದು ಬಟ್ಟೆ  ಮುಳ್ಳಿನ ಮೇಲೆ ಬೀಳದಂತೆ  ಬಟ್ಟೆಯೇ ಕಾಪಾಡುತ್ತದೆ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

Sunday, January 18, 2015

ಇಂಗ್ಲೀಷ್ ಇನ್ ಕನ್ನಡ

ಆಕ್ಚ್ವಲಿ ವಾಟ್ ಹಾಪಂಡ್ ಯು ನೋ....?
ಒನ್ಸ್ ಅಪಾನ್ ಟೈಮ್ ವಿ ಆರ್ ಆಲ್ ಟೈಪಿಂಗ್ ಕನ್ನಡ ಮೆಸ್ಸೇಜ್ ಇನ್ ಇಂಗ್ಲೀಷ್. ಬಟ್ ನೌ.... ಕನ್ನಡನೇ ನೇರವಾಗಿ ಟೈಪ್ ಮಾಡಬಹುದು ಆದರೂ ನಾನು ಇಂಗ್ಲೀಷನ್ನು ಕನ್ನಡದಲ್ಲಿ ಟೈಪ್ ಮಾಡಿ ಸೇಡು ತೀರಿಸಿಕೊಳ್ಳುತ್ತಿದ್ದೇನೆ.
                    

                  
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

Saturday, January 17, 2015

ಕನ್ಯತ್ವ+ಪುರುಷತ್ವ




ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

★ ಕದ್ದು ಮುಚ್ಚಿ - ಕಣ್ಣು ಮುಚ್ಚಿ ★

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗಕ್ಕೆ ಗೊತ್ತಾಗದೆಂದುಕೊಂಡಿರಾ...? 
ಹೀಗೆ ಬಯ್ಯುದಿದೆ ಕದ್ದು ಮುಚ್ಚಿ ಪಡೆದು ಅನುಭವಿಸುವವರ ವಿರುದ್ಧವಾಗಿ.
ಆದರೆ ಇಲ್ಲಿ ಬೆಕ್ಕಿಗೆ ತಾನು ಕುಡಿಯುತ್ತಿರುದು ಹಾಲೆಂದು ಗೊತ್ತಿದ್ದೇ ತಾನು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ. 
ಕಾರಣ 
ಒಂದು, ತಾನು ಹಾಲು ಕುಡಿವಾಗ ಅನುಭವಿಸುವ ಸ್ವಾಧ ಸುಖವನ್ನು ನೋಡಿ ಮನುಷ್ಯನಿಗಾಗುವ ಹೊಟ್ಟೆಉರಿಯನ್ನು ತಾನು ನೋಡಲಾರೆ ಎಂದು.
ಇನ್ನೊಂದು, ಇಂಥಹ ಸ್ವಾಧ ಸುಖವನ್ನು ಅನುಭವಿಸುವಾಗ ತನ್ನ ಏಕಾಗ್ರತೆಗೆ ದಕ್ಕೆಯಾಗದಿರಲೆಂದು.

★ ಪ್ರೇಮಿಗಳು ಪರಸ್ಪರರು ಮುತ್ತಿಡುವಾಗ ಹುಡುಗಿ ಕಣ್ಣು ಮುಚ್ಚುತ್ತಾಳಂತೆ ಅದಕ್ಕೆ ಕಾರಣ ತಾನು ಬೆಕ್ಕಿನಂತೆ ಕಣ್ಣು ಮುಚ್ಚಿ ಹಾಲು ಕುಡಿಯುತ್ತಿದ್ದೇನೆಂದಲ್ಲ. ಬದಲಾಗಿ
ಒಂದು, ಮುತ್ತಿಡುವಾಗ ತನ್ನ ಪ್ರೇಮಿ ಇನಿಯನಿಗಾಗುವ ಮುತ್ತಿನ ಮತ್ತೇರಿದ ಆನಂದವನ್ನು ನೋಡಿ ಸ್ವತಃ ತಾನೇ ತಡೆಯಲಾರದ ಹೊಟ್ಟೆಉರಿಯಿಂದ ಕಣ್ಣು ಮುಚ್ಚುವಳೆಂದು ತುಂಟ ಸಮರ್ಥನೆಯಾದರೆ.... 
ಇನ್ನೊಂದು, ಸ್ವಾದ ಸುಖದ ಏಕಾಗ್ರತೆಗೆ ಧಕ್ಕೆಯಾಗದಿರಲೆಂಬುದು ಪ್ರೇಮಲೋಕದ ಸತ್ಯವಾಕ್ಯ.



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

ಸೆಂಟ್ರಲ್ ಸ್ಟಾಪ್

ಆರ್.ಟಿ. ನಗರದಿಂದ ಬಸ್ಸು ಹತ್ತುತ್ತಾ “ಸರ್ ಬಸ್ಸು ಮೆಜಸ್ಟಿಕ್ ಹೋಗುತ್ತಾ” ಅಂತ ಕಂಡೆಕ್ಟರ್ ನ ಕೇಳ್ದೆ. ಆಗ ಅವರು ಒಂದೇ ಸಮನೆ “ಸೆಂಟ್ರಲ್ ಹೋಗಲ್ಲ... ಸೆಂಟ್ರಲ್ ಹೋಗಲ್ಲ” ಅಂತ ರೇಗಿದರು... ಆಗ ನಾನು “ಸರ್ ಸೈಡಲ್ಲಾದರೂ ಪರವಾಗಿಲ್ಲ ಮೆಜಸ್ಟಿಕ್ ಹೋಗುತ್ತಲ್ಲ” ಅಂತ ಕೇಳಿದರೆ, ಕಂಡೆಕ್ಟರ್ ಸಿಟ್ಟಲ್ಲಿ “ರೀ ಸ್ವಾಮಿ ಯಾವ ಊರುರಿ ನಿಮ್ದು...? ಸೆಂಟ್ರಲ್ ಅನ್ನೋದು ಒಂದು ಬಸ್ ಸ್ಟಾಪ್ ಹೆಸರು” ಅಂತ ಹೇಳಿ ಟಿಕೆಟ್ ತುಂಡು ಮಾಡಿಕೊಟ್ರು.

ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


ಬರದ ಗೆರೆ


ನಂಬಿಕೆ




ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

ಉತ್ತರ ಬೇಕಿತ್ತು

ಉತ್ತರ ಬೇಕಿತ್ತು
1) 
ಕಿವಿ ಕಿವಿಡಾಗುತ್ತದೆ
ಕಣ್ಣು ಕುರುಡಾಗುತ್ತದೆ
ನಾಲಗೆ...........
ಏನಾಗುತ್ತೆ....?

2)
ನಾಲಗೆಗೆ ಸುಖ- ರುಚಿ
ಕಿವಿಗೆ ಸುಖ- ಇಂಪು
ಕಣ್ಣಿಗೆ ಸುಖ-........?


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu



ಟ್ರಾಫಿಕ್ ಪಾಠ

ಬೆಂಗಳೂರ ಟ್ರಾಫಿಕ್ ಕಲಿಸಿದ ಬದುಕಿನ ಪಾಠ "ಫಾಲೋ ಮಾಡುವುದಕ್ಕಿಂತಲೂ ಓವರ್ ಟೇಕ್ ಮಾಡುವುದು ಸುಲಭ". ಗುರುವನ್ನು ಹಿಂಬಾಲಿಸದೆ ಓವರ್ ಟೇಕ್  ಮಾಡುವವರೇ ಹೆಚ್ಚು.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


Thursday, January 15, 2015

ಒಂದು ಕಾಲಚಿತ್ರ


ಪಾಸ್

ಬದುಕಿನಲ್ಲಿ ಒಂದು ವಿಷಯದಲ್ಲಿ
ಪಾಸಾಗೋದಕ್ಕೆ ಒಂದೇ ಸಲ ಸಾಧ್ಯ.
ಆದರೆ 
ಫೈಲಾಗೋದಕ್ಕೆ ಸುಮಾರು ಸಲ ಸಾಧ್ಯ.
*** ಪಾಸ್ ಆದ್ರೆ ಸಂಬಂಧನೇ ಮುಗೀತು
ಅದೇ ಫೈಲ್ ಆದ್ರೆ ಸಂಬಂಧ ಮತ್ತು ಅನುಭವ ವೃದ್ಧಿನೇ!!



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

ನೀರು ಕುಡಿಯುವುದು

ಬೇರೆಯವರು ನಮಗೆ ನೀರು ಕುಡಿಸುವ ಮುನ್ನ,
ನಾವೇ ಬೇಕಾದಷ್ಟು ಕುಡಿಯೋದು ಒಳ್ಳೇದುಮಿಕ್ಸ್ ಮಾಡದೆ.
ಹೌದು ವೈದ್ಯರ ಪ್ರಕಾರ ಒಬ್ಬ ಮನುಷ್ಯ ದಿನ ಒಂದಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಲೇಬೇಕಂತೆ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


ಟೈ ನೂಲಾದ ಜನಿವಾರ

ಜನಿವಾರ ಈಗ ಟೈನೂಲಾಗಿದೆ. ಅದೇ ನೋಡಿ ಗೆಲ್ಲುವುದಕ್ಕಿಂತಲೂ ಅನಿವಾರ್ಯ ಟೈ ಮಾಡಿಕೊಳ್ಳೊದೇ ಬದುಕಾಗಿದೆ.
ಪ್ರತಿವರ್ಷದಂತೆ ನೂಲ ಶ್ರಾವಣದಂದು ಜನಿವಾರ ಧಾರಣೆ ಮಾಡಲೆಂದು ಮೊನ್ನೆ ಊರಿಗೆ ಹೋಗಿದ್ದೆ ಅಪ್ಪನ ಅಪ್ಪಣೆಯ ಮೇರೆಗೆ. ಎಡದ ಹೆಗಲ ಮೇಲಿಂದ ಇಳಿಯಬಿಟ್ಟರೆ ಬಲದ ಕೈ ಜನಿವಾರದೊಳಗಿರಬೇಕು, ಎಡದ ಕೈ ಜನಿವಾರದ ಹೊರಗಿರಬೇಕು ಇದು ಕ್ರಮ. ಹೀಗೆ ಪ್ರತೀ ವರ್ಷದ ಜನಿವಾರದಲ್ಲೂ ಒಂದು ತರಹದ ಹಿತ ಇರುವುದು ಆದರೆ ಸಲ ಯಾಕೋ ಕಿರಿ ಕಿರಿ ಅನ್ನಿಸಿತು. ಗಮನಿಸಿ ನೋಡಿದರೆ ಜನಿವಾರದ ನೂಲು ಹತ್ತಿಯದ್ದಾಗಿರಲಿಲ್ಲ ಬದಲಾಗಿ ನೈಲಾನಿನ ಜಾತಿಯ ಟೈ ನೂಲಾಗಿದೆ. ಇದರ ಬಗ್ಗೆ ಪುರೋಹಿತರ ಬಳಿ ಕೇಳಿದರೆ. ಇನ್ನು ಪರಂರೆಯ ನೂಲಿಗೆ ಹೆಚ್ಚು ಆಯುಷ್ಯ ಇಲ್ಲ. ಟೈ ನೂಲಿನ ಜನಿವಾರ ಹಾಕಿದ್ರೆ ಒಂದುವೇಳೆ ನೀವು ಬರುವ ವರ್ಷ ಬರದೇ ಇದ್ದರೂ ಎರಡನೇ ವರ್ಷಕ್ಕೆ ಮುಂದುವರಿಸುವಷ್ಟು ಕ್ವಾಲಿಟಿ ಎಂದರು. ಹೌದು ಕ್ವಾಲಿಟಿ ಗುಟ್ಟು ಗೊತ್ತಾಗಿದ್ದು ಬೆನ್ನುಜ್ಜಿಕೊಳ್ಳವಾಗ. ಜನಿವಾರವನ್ನು ಜಪ ಮಾಡುವುದಕ್ಕಲ್ಲದೆ ಬೇರೆ ಯಾವುದಕ್ಕೂ ಬಳಕೆ ಮಾಡಕೂಡದೆಂದು ವೃತ ಉಪದೇಶ ಮಾಡುವಾಗ ಗುರುಗಳು ಉದಾಹರಣೆ ಕೊಟ್ಟೇ ಹೇಳಿದ್ದರು. ಗೊತ್ತಿರಲಿಲ್ಲ ಸ್ನಾನ ಮಾಡುವಾಗ ಜನಿವಾರದಲ್ಲಿ ಬೆನ್ನುಜ್ಜಿಕೊಳ್ಳಲೂ ಆಗುತ್ತದೆಂದು. ಗುರುಗಳೇ ಹೇಳಿದ್ದು ಹಾಗೆ ಮಾಡಬಾರದೆಂದು. ಆಗಲೇ ಆಸೆ ಹುಟ್ಟಿದ್ದು ಒಂದು ಸಲ ಮಾಡಿಯೇ ನೋಡೋಣವೆಂದು.
ಗುರುಗಳ ಮಾತು ಮೀರಿದರೆ ತನ್ನ ಬೆನ್ನಿಗೇ ಗಾಯ ಗ್ಯಾರಂಟಿ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu